ಗುಂಟೂರು ಜಿಲ್ಲೆ ಆಂಧ್ರ ಪ್ರದೇಶದ ಒಂದು ಜಿಲ್ಲೆ. == ವಿಸ್ತೀರ್ಣ ಮತ್ತು ಜನಸಂಖ್ಯೆ == ಗುಂಟೂರು ಜಿಲ್ಲೆಯ ವಿಸ್ತೀರ್ಣ ೫,೮೦೨ ಚ.ಕಿ.ಮೀ ಆಗಿದೆ. ಇಲ್ಲಿನ ಜನಸಂಖ್ಯೆ ೪೮,೮೯,೨೩೦ (೨೦೧೧) ಆಗಿದೆ. == ವ್ಯವಸಾಯ == ಇಲ್ಲಿ ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯವಿದೆ. ಅಕ್ಕಿ, ಜೋಳ, ಮೆಣಸಿನಕಾಯಿ, ನೆಲಗಡಲೆ, ಹೊಗೆಸೊಪ್ಪು ಇಲ್ಲಿಯ ಬೆಳೆಗಳಾಗಿವೆ. ವನಸ್ಪತಿ, ಜವಳಿ, ಸಿಮೆಂಟ್ ಮತ್ತು ಹೊಗೆಸೊಪ್ಪಿನ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ. == ಐತಿಹಾಸಿಕ == ಈ ಜಿಲ್ಲೆಗೆ ಸೇರಿದ ಅಮರಾವತಿಯಲ್ಲಿ ಆಂಧ್ರ ಸಾತವಾಹನ ರಾಜರು ಕಟ್ಟಿಸಿದ ಮಹಾಯಾನ ಬೌದ್ಧಧರ್ಮದ ಚೈತ್ಯಗಳು ವಿಹಾರಗಳು ಸ್ತೂಪಗಳು ಮತ್ತು ನಾಗಾರ್ಜುನ ಕೊಂಡಗಳು ಬೌದ್ಧರ ಕಾಲದ ಅವಶೇಷಗಳ ನೆಲೆಗಳಾಗಿವೆ. == ಬಾಹ್ಯ ಸಂಪರ್ಕಗಳು == == ಉಲ್ಲೇಖಗಳು ==